ಆತ್ಮೀಯರೇ,

     1988 ಆಗ ನಾನು 6ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ಶಾಲೆಯ ಪಕ್ಕದಲ್ಲಿ Vyshya Bank ಶಾಖೆ ಪ್ರಾರಂಭವಾಯಿತು. ದಿನವೂ ಊಟದ ಸಮಯದ ಬಿಡುವಿನಲ್ಲಿ ನಾನು ಬ್ಯಾಂಕ್ ಸುತ್ತ ತಿರುಗಾಡುತ್ತಿದ್ದೆ. ಜೈಲು ತರಹದ ಕಂಬಿಯೊಳಗೆ ವ್ಯತ್ತಿಯೊಬ್ಬ ಕುಳಿತಿರುತ್ತಿದ್ದ ಅನೇಕರು ಬಂದು ಹಣ ತೆಗೆದುಕೊಂಡು ಹೋಗುತ್ತಿದ್ದರುನನಗೆ ಇಲ್ಲಿ ಏನು ನಡೆಯಿತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ. ಹೀಗೆ ಒಂದು ದಿನ   ಬ್ಯಾಂಕ್ ಒಳಗೆ ಹೋಗಿ ಅಲ್ಲಿ ಕುಳಿದಿದ್ದವರನ್ನು ವಿಚಾರಿಸಿದೆ, ಆಗ ತಿಳಿಯಿತು ಇದು ಹಣ ಕೂಡಿಡುವ ಜಾಗ ಎಂದು. ಆದರೆ ಖಾತೆ ತೆರೆಯಲು 10 ರೂಪಾಯಿ ಬೇಕಿತ್ತು.  ಎಲ್ಲಿಂದ ತರುವುದು? ನಾನು ಓಧುತ್ತಿದ್ದಿದ್ದು ಸರಕಾರಿ ಶಾಲೆಯಲ್ಲಿ, ಶಾಲೆ ಫೀಸು ವರ್ಷಕ್ಕೆ 6ರೂ ಮಾತ್ರ 10 ರೂ ಹೇಗೆ ಸೇರಿಸುವುದು.  ಆ ಕಾಲದಲ್ಲಿ ೧೦ಪೈಸೆ ಅಮ್ಮನಿಂದ ಪಡೆಯುದೇ ಬಹಳ ಕಷ್ಟ .  ನಾವು ಒಟ್ಟು 7ಜನ ಮಕ್ಕಳು, ನಾನು 3ನೇ ಮಗ , ನನಗೆ ಇಬ್ಬರು ಅಣ್ಣಂದಿರು,  ಇಬ್ಬರು ತಮ್ಮಂದಿರು ಹಾಗೂ ಇಬ್ಬರು ತಂಗಿಯರು ಎಷ್ಟು ಚಂದ ಅಲ್ಲವೇ.  ಅಪ್ಪ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ನಮ್ಮನೆಲ್ಲ ನೋಡಿಕೊಂಡು ಬಿಡುವು ಸಿಕ್ಕಾಗ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದರು.

     ನನ್ನ ತಲೆಯಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡುವುದೇ  ಚಿಂತನೆ. ಅಪ್ಪನಿಗೆ ಬ್ಯಾಂಕ್ ಅಕೌಂಟ್ ಬಗ್ಗೆ ಆ ಸಮಯದಲ್ಲಿ ಜಾಸ್ತಿ ಮಾಹಿತಿ ಕೂಡ ಇರಲಿಲ್ಲ. ದಿನವೂ ಶಾಲೆಯಲ್ಲಿ ಮದ್ಯಾಹ್ನದ ಊಟ ಮುಗಿಸಿ ಬ್ಯಾಂಕ್ ಒಂದು ರೌಂಡ್ ಬರುತ್ತಿದ್ದೆ ಹಾಗೇನೇ ಅಕೌಂಟ್ ಓಪನ್ ಮಾಡಲು ಏನೇನು  ಬೇಕು ಎಂದು ತಿಳಿದುಕೊಂಡೆ.  ಅಂತೂ ಇಂತೂ 4 ತಿಂಗಗಳಿನಲ್ಲಿ ಅಪ್ಪ ಅಮ್ಮನಿಗೆ ತಿಳಿಯದೆ 10ರೂ ಕೂಡಿಸಿ, ಬ್ಯಾಂಕ್ ನಿಂದ ಅರ್ಜಿ ತಂದು ಹೆಡ್ ಮಾಸ್ಟರ್ ಕೈಯಲ್ಲಿ ಇಂಟ್ರೊಡ್ಯೂಸರ್ ಸಹಿ ಹಾಕಿಸಿ, ಬ್ಯಾಂಕ್ ಉಳಿತಾಯ ಖಾತೆ ಓಪನ್ ಮಾಡಿಸಿಯೇ ಬಿಟ್ಟೆ. ಕುತೂಹಲದ ವಿಷಯವೆಂದರೆ ನಾನು ಯಾರ ಸಹಾಯವನ್ನೂ ಪಡೆಯಲಿಲ್ಲ, ಆಗ ನಾನು ಇನ್ನೂ 11 ವಯಸ್ಸಿನ ಹುಡುಗ.

     ಓಹ್!! ನಾನು ನಿಮಗೆ ತಿಳಿಸಲು ಬಂದ ವಿಷಯಾನೇ ಬೇರೆ ಆದರೆ ನನ್ನದೇ ಕಥೆ ಹೇಳುದ್ದಿದೇನೆ. ವಿಷಯಕ್ಕೆ ಬರೋಣವೇನನ್ನ ಮೊದಲ ಅಂಕಣದೊಂದಿಗೆ ನನ್ನ ಪರಿಚಯ ಮಾಡಿಕೂಳ್ಳಲು ತುಂಬಾ ಖುಷಿಯಾಗಿದೆ .ನನ್ನ ಹೆಸರು ಜಗದೀಶ, ಗೆಳೆಯರು ನನ್ನನ್ನು ಜಗನ್ ಎಂದು ಕರೆಯುವರು. ಉಳಿತಾಯ ಮಾಡುವುದು ಮತ್ತು ಹೂಡಿಕೆಮಾಡುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ. ನಾನು ಒಂದು ಕಂಪನಿಯಲ್ಲಿ ಪ್ಲಾನಿಂಗ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ ಹಾಗೂ ನಾನು ಕಳೆದ 18ವರ್ಷಗಳಿಂದ  ಆರ್ಥಿಕ ಸಲಗೆಗಾರನಾಗಿ ಮತ್ತು ವಿಮಾ ಪ್ರತಿನಿಧಿಯಾಗಿ ಹಾಗೂ Share Trading ಮೂಲಕ ಅನೇಕ ಹೂಡಿಕೆದಾರರಿಗೆ ಸೇವೆಯನ್ನು ಕೊಡುತ್ತಿದ್ದೇನೆ. ನಾನು Mangalore University ಯಿಂದ B.Com ಪದವಿಯನ್ನು ಮತ್ತು Madurai Kamaraja Universityಯಲ್ಲಿ Master of Computer Science (MCA) ವ್ಯಾಸಂಗ ಮಾಡಿರುತ್ತೇನೆ. ಅಲ್ಲದೆ IRDA, AMFI ಮತ್ತು NISM Certificate , NSE,BSE ಹಾಗೂ MCX  Trading ಲೈಸೆನ್ ಹೊಂದಿರುತ್ತೇನೆ.

ಕನ್ನಡಿಗರಿಗೆ  ಕನ್ನಡದಲ್ಲಿ ಮ್ಯೂಚುಯಲ್ ಫಂಡ್ , ಷೇರು ಟ್ರೇಡಿಂಗ್ , ಕಮೊಡಿಟಿಟಿ ಟ್ರೇಡಿಂಗ್ , ಕರೆನ್ಸಿ ಟ್ರೇಡಿಂಗ್ , ಲೈಫ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್ ಮತ್ತು ಇತರ ಹಣಕಾಸಿಗೆ ಸಂಬಂಧಪಟ್ಟ ಇನ್ನೂ ಹಲವು ನನಗೆ ತಿಳಿದ ಹಲವು ವಿಷಯಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಬ್ಲಾಗ್ಗ್ಗನ್ನು ಪ್ರಾರಂಭಿಸುತ್ತಿದ್ದೇನೆ.  

 ನಿಮ್ಮ ಅನಿಸಿಕೆ, ಸಲಹೆ ಮತ್ತು  ಸಹಕಾರಕ್ಕಾಗಿ ಧನ್ಯವಾದಗಳು