"ಹಣವನ್ನು ಉಳಿಸಿ ಮತ್ತು ಹಣವು ನಿಮ್ಮನ್ನು ಉಳಿಸುತ್ತದೆ"

    ನಾನು ಕಂಡಂತೆ ಅನೇಕರಿಗೆ ಷೇರು ಮಾರುಕಟ್ಟೆ ಅಂದರೆ ತುಂಬಾ ಭಯ. ಯಾಕೆ ಈ ಭಯ? ಏಕೆಂದರೆ ಜನರು ತಮ್ಮ ಗೆಳೆಯರು ಹಾಗೂ ಜಾಹಿರಾತುಗಳನ್ನು ನಂಬಿ ಯಾವುದೋ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿರುತ್ತಾರೆ ಹಾಗೂ ಕೆಲವರು ಯಾವುದೇ ಅನುಭವ ಇಲ್ಲದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟವನ್ನು ಅನುಭವಿಸಿರುತ್ತಾರೆ. ನನ್ನ ಅನುಭವದ ಪ್ರಕಾರ ಹೇಳುವುದಾದರೆ ಒಬ್ಭ ವ್ಯಕ್ತಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಅದರ ಕಾರ್ಯ ವೈಖರಿಯನ್ನು ತಿಳಿದುಕೊಳ್ಳುವುಧು ಅತೀ ಮುಖ್ಯ ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ, ಹಾಗೂ ಇದರಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹೆಚ್ಚು ಅನ್ವೇಷನೆ ಮಾಡುವ ಅಗತ್ಯ ಇರುವುದಿಲ್ಲ ಹಾಗೂ ಅನುಭವ ಬೇಕಿಲ್ಲ. ಏಕೆಂದರೆ ಮ್ಯೂಚುಯಲ್ ಫಂಡ್ ಅನುಭವಿ ಹಾಗೂ ವೃತ್ತಿಪರ ಫಂಡ್ ವ್ಯವಸ್ಥಾಪಕರಿಂದ(Fund Manager) ನಡೆಸಲ್ಪಡುತ್ತದೆ

ಮ್ಯೂಚುಯಲ್ ಫಂಡ್ ಎಂದರೇನು? (What is Mutual Fund)

“ಮ್ಯೂಚುಯಲ್ ಫಂಡ್ ಎನ್ನುವುದು ಒಂದು ರೀತಿಯ ಹಣಕಾಸು ಹೂಡಿಕೆವಿಕೆಯ ವಿಧಾನ ಅಥವಾ ಮಾಧ್ಯಮವಾಗಿದೆ. ಅನೇಕ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರುಗಳು, ಬಾಂಡ್‌ಗಳು, ಹಣದ ಮಾರುಕಟ್ಟೆಯ ಉಪಕರಣಗಳು(Money Market) ಮತ್ತು ಇತರ ಸುರಕ್ಷತಾ(Securities) ಪತ್ರಗಳಲ್ಲಿ ಹೂಡಿಕೆ ಮಾಡಿ, ಮ್ಯೂಚುಯಲ್ ಫಂಡ್ ಮತ್ತು ಹೂಡಿಕೆದಾರರ ನಡುವೆ ಒಪ್ಪಿದ ಸಾಮಾನ್ಯ ಹೂಡಿಕೆ ಉದ್ದೇಶಗಳಿಗೆ ಅನುಗುಣವಾಗಿ ಪರಸ್ಪರ ಹೊಂದಿಕೆಯಾಗುವಂತೆ ರಚಿಸಲ್ಪಟ್ಟಿರುತ್ತದೆ ಮತ್ತು ನಿರ್ವಹಿಸಲಾಗುತ್ತದೆ”.

ಈ ಕೆಳಗಿನ ಚಿತ್ರಣವು ಮ್ಯೂಚುಯಲ್ ಫಂಡ್ ಬಗ್ಗೆ  ಸುಲಭದ ವಿವರಣೆ ನೀಡುತ್ತದೆ.





ಬೇರೆ ರೀತಿಯಲ್ಲಿ ಹೇಳುವುದಾದರೆ, ಮ್ಯೂಚುವಲ್ ಫಂಡ್‌ನಲ್ಲಿನ ಹೂಡಿಕೆ ಮಾಡುವುದರಿಂದ ಹೂಡಿಕೆದಾರರು ಷೇರುಗಳು, ಬಾಂಡ್‌ಗಳು, ಹಣದ ಮಾರುಕಟ್ಟೆ ಉಪಕರಣಗಳು ಮತ್ತು ಇತರ ಸೆಕ್ಯೂರಿಟಿಗಳಿಗೆ ಪ್ರವೇಶವನ್ನು ಪಡೆದಂತಾಗುತ್ತದೆ
ಮ್ಯೂಚುಯಲ್ ಫಂಡ್ ನಲ್ಲಿ ನಷ್ಟ ಎನ್ನುವುದು ಶೇರ್ ಗಳಲ್ಲಿ ಆಗುವ ನಷ್ಟಕ್ಕಿಂತ ತುಂಬಾನೇ ಕಡಿಮೆ ಹಾಗೂ ಲಾಭವು ಕೂಡ ಹಾಗೇನೇ. ಅದಲ್ಲದೆ ಮ್ಯೂಚುಯಲ್ ಫಂಡ್ ಗಳಲ್ಲಿ ನೀವು ಹೂಡಿಕೆಯನ್ನು ಕೇವಲ ೫೦೦ ರೂ ಗಳಿಂದ ಪ್ರಾರಂಭಿಸ ಬಹುದು, ಶೇರ್ ನಲ್ಲಿ ಹೂಡಿಕೆ ಮಾಡಲು ಹೇಚ್ಚು ಬಂಡವಾಳ ಬೇಕಾಗುತ್ತದೆ. ನಿಮ್ಮ ಆದಾಯ ಎಷ್ಟೇ ಅಧಿಕವಾಗಿದ್ದರೂ, ನೀವು ಏನನ್ನೂ ಉಳಿಸದಿದ್ದರೆ, ಖಚಿತವಾಗಿದ ನೀವು ಎಂದಿಗೂ ಆರ್ಥಿಕವಾಗಿ ಸ್ವತಂತ್ರ ಪಡೆಯಲಾರಿರಿ.
ಒಂದು ಮುಖ್ಯವಾಧ ವಿಷಯ ಏನೆಂದರೆ ನಾವು ಯಾವುದೊ ಒಂದು ಮ್ಯೂಚುಯಲ್ ಫಂಡ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿರುತ್ತೆವೆ, ಆದರೆ ಫಂಡ್ ವ್ಯವಸ್ಥಾಪಕ(Fund Manager) ನಮ್ಮ ಹಣವನ್ನು ತಾನು ಸಂಶೋಧನೆ(research) ಮಾಡಿರುವ ಹಲವು ಕಂಪೆನಿಗಲ್ಲಿ ಹೂಡಿಕೆ ಮಾಡುತ್ತಾನೆ. ಇದರಿಂದ ನಾವು ಕೂಡ ಪರೋಕ್ಷವಾಗಿ ಆ ಕಂಪನಿಗಳ ಷೇರುದಾರರಾಗುತ್ತೆವೆ. ಹೀಗೆ ವಿವಿಧ ಕಂಪೆನಿಗಲ್ಲಿ ಹೂಡಿಕೆ ಮಾಡುವುದರಿಂದ ಫಂಡ್ ಲಾಭ & ನಷ್ಟವು ಹಂಚಿಕೆಯಾಗುತ್ತದೆ.
ಉದಾರಣೆಗೆ SBI Bluechip Fund ಇದು SBI ಆಸ್ತಿ ನಿರ್ವಹಣಾ ಕಂಪನಿಯ (AMC) ಒಂದು ಫಂಡ್, ಈ ಫಂಡ್ ವ್ಯವಸ್ಥಾಪಕನು ಫಂಡ್ ಹಣವನ್ನು ಸುಮಾರು 55 ಕಂಪೆನಿಗಳಲ್ಲಿ ತೂಡಗಿಸಿರುತ್ತಾನೆ. ಕೆಲವು ಕಂಪನಿಗಳು ಈ ಕೆಳಗಿನಂತಿವೆ



SBI Bluechip Fundನಲ್ಲಿ ಅತ್ಯಧಿಕ ಹಿಡುವಳಿ ಇರುವ ಕಂಪನಿಗಳು (As on 18/06/2020)

     
SBI Bluechip Fundನಲ್ಲಿ ಅತ್ಯಧಿಕ ಹಿಡುವಳಿ ಇರುವ ಕಂಪನಿಗಳು (As on 18/06/2020)
ಕಂಪನಿ(Company) ವಲಯ(Sector) % ಹಿಡುವಳಿ(Holding)
HDFC Bank ಹಣಕಾಸು 9.1
ICICI Bank ಹಣಕಾಸು 5.43
ITC ಗ್ರಾಹಕ ಸರಕುಗಳು(FMCG) 4.49
Divi's Laboratories ಆರೋಗ್ಯ ರಕ್ಷಣೆ 4.4
Reliance Industries ಶಕ್ತಿ(energy) 3.89
Nestle India ಗ್ರಾಹಕ ಸರಕುಗಳು(FMCG) 3.66
Larsen & Toubro ನಿರ್ಮಾಣ 3.59
HCL Technologies ತಂತ್ರಜ್ಞಾನ 3.4
HDFC ಹಣಕಾಸು 3.22
Kotak Mahindra Bank ಹಣಕಾಸು 3.19
Shree Cement ನಿರ್ಮಾಣ 3.18
Bharti Airtel ಸ೦ಪರ್ಕ 2.82
Infosys ತಂತ್ರಜ್ಞಾನ 2.7
ICICI Prudential Life Insurance Co. Ltd. ಹಣಕಾಸು 2.41
Axis Bank ಹಣಕಾಸು 2.18
State Bank of India ಹಣಕಾಸು 2.12
HDFC Life Insurance ಹಣಕಾಸು 2.09
ICICI Lombard General Insurance Company ಹಣಕಾಸು 2.01
Eicher Motors ವಾಹನ ಉದ್ಯಮ 1.99
Mahindra & Mahindra ವಾಹನ ಉದ್ಯಮ 1.79
Motherson Sumi Systems ವಾಹನ ಉದ್ಯಮ 1.57
Hero Motocorp ವಾಹನ ಉದ್ಯಮ 1.48
PI Industries ಸ೦ಪರ್ಕ 1.43
Ultratech Cement ನಿರ್ಮಾಣ 1.28
HPCL ಶಕ್ತಿ(energy) 1.26


    ಭಾರತದ ಮೊದಲ ಮ್ಯೂಚುಯಲ್ ಫಂಡ್ ಕಂಪನಿ UTI (Unit Trust of India) 1963ರಲ್ಲಿ ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ(RBI) ನೇತ್ರತ್ವದಲ್ಲಿ ಸ್ಥಾಪಿತವಾಯಿತು. ಭಾರತದ ಮೊದಲ ಮ್ಯೂಚುಯಲ್ ಫಂಡ್ “ Unit Scheme 1964 (US-64)”. ಬಹಳ ವರ್ಷಗಳ ನಂತರ 1987 ರಲ್ಲಿ, SBI ಮ್ಯೂಚುಯಲ್ ಫಂಡ್ ಭಾರತದ ಮೊತ್ತ ಮೊದಲ UTI ಅಲ್ಲದ ಮ್ಯೂಚುಯಲ್ ಫಂಡ್ ಆಗಿ ಹೊರಹೊಮ್ಮಿತು. 1993 ರ ವರ್ಷವು ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಹೊಸ ಯುಗವಾಗಿ ಪರಿಣಮಿಸಿತು. ಈ ಸಮಯದಲ್ಲಿ ಖಾಸಗಿ ವಲಯದ ಕಂಪನಿಗಳ ಆಗಮನವಾಯಿತು. ಭಾರತೀಯ ಮ್ಯೂಚುಯಲ್ ಫಂಡ್ ಉದ್ಯಮದಲ್ಲಿ ಆರೋಗ್ಯಕರ ಮತ್ತು ನೈತಿಕ ಮಾರುಕಟ್ಟೆ ಅಭ್ಯಾಸಗಳನ್ನು ಉತ್ತೇಜಿಸುವುವ ಸಲುವಾಗಿ 1995 AMFI( the Association of Mutual Funds in India) ಸ್ಥಾಪಿತವಾಯಿತು. 1996 ರಲ್ಲಿ ಮ್ಯೂಚುಯಲ್ ಫಂಡ್ ನಿಯಮಗಳು ಜಾರಿಗೆ ಬಂದವು, ಹಾಗೂ ಮ್ಯೂಚುಯಲ್ ಫಂಡ್ ಕಂಪನಿಗಳು ವಿಪರೀತವಾಗಿ ಬೆಳೆಯಲಾರಂಭಿಸಿತು. ಇದೇ ಸಮಯದಲ್ಲಿ ವಿದೇಶಿ ಸಂಸ್ಥೆಗಳು ಭಾರತದಲ್ಲಿ ಜಂಟಿ ಉದ್ಯಮಗಳು ಮತ್ತು ಸ್ವಾಧೀನಗಳ ಮೂಲಕ ತನ್ನ ಅಸ್ತಿತ್ವವನ್ನು ಪಡೆಯಿತು.


ಪ್ರಿಯ ಹೂಡಿಕೆಧಾರರೇ , ಮ್ಯೂಚುಯಲ್ ಫಂಡ್ ಕಂಪನಿಗಳು ವಿಪರೀತವಾಗಿ ಬೆಳೆಯುತ್ತಿದೆ, ಪಟ್ಟಣಗಳಲ್ಲಿ ಹೂಡಿಕೆದಾರರು ಅಧಿಕವಾಗುತ್ತಿದ್ಧಾರೆ ಆದರೆ ಇದು ಇನ್ನೂ ನಮ್ಮ ಹಳ್ಳಿಗಳನ್ನು ತಲುಪಿಲ್ಲ ಯಾಕೆ ?? ಹಾಗೂ ಮ್ಯೂಚುಯಲ್ ಫಂಡ್ ಹೂಡಿಕೆಯಿಂದ ಕೋಟಿ ರೂಪಾಯಿ ಆರ್ಥಿಕ ಗುರಿಯನ್ನು (Financial Goal)ತಲುಪುವುಧು ಹೇಗೆ ???...ಇನ್ನೂ ಹಲವು ಮ್ಯೂಚುಯಲ್ ಫಂಡ್ ವಿಷಯಗಳನ್ನು ಮುಂದಿನ ಅಂಕಣದಲ್ಲಿ ನೋಡೋಣ…..