ಪ್ರಿಯ ಹೂಡಿಕೆದಾರರೇ ನನ್ನ ಮೊದಲ ಅಂಕಣವನ್ನು ಓಧಿರುವ ನಿಮಗೆ ಧನ್ಯವಾದಗಳು.

    ಮ್ಯೂಚುಯಲ್ ಫಂಡ್ ಕಂಪನಿಗಳು ವಿಪರೀತವಾಗಿ ಬೆಳೆಯುತ್ತಿದೆ, ಪಟ್ಟಣಗಳಲ್ಲಿ ಹೂಡಿಕೆದಾರರು ಅಧಿಕವಾಗುತ್ತಿದ್ಧಾರೆ  ಆದರೆ  ಇದು ಇನ್ನೂ ನಮ್ಮ ಹಳ್ಳಿಗಳನ್ನು ತಲುಪಿಲ್ಲ ಯಾಕೆ ?? ಇದಕ್ಕೆ ಮೊದಲ ಕಾರಣ ಮ್ಯೂಚುಯಲ್ ಫಂಡ್ ಡಿಸ್ಟ್ರಿಬ್ಯೂಟರ್ ಗಳಿಗೆ ಸಿಗುವ ಕಮಿಷನ್ ಎಂಧು ಹೇಳಬಹುದು. ಇಬ್ಬರ ನಡುವಿನ ಕಮಿಷನ್ ಅಜಗಜಾಂತರ. ಆದುದರಿಂದಲೇ ಇನ್ಶೂರೆನ್ಸ್ ಏಜೆಂಟ್ ಸಂಖ್ಯೆ ತುಂಬಾ ಜಾಸ್ತಿ. ಅಲ್ಲದೆ ಇನ್ಶೂರೆನ್ಸ್ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡುವುದು ಸುಲಭ, ಆದರೆ ಮ್ಯೂಚುಯಲ್ ಫಂಡ್ ಬಗ್ಗೆ ಗ್ರಾಹಕರಿಗೆ ವಿವರಣೆ ನೀಡುವುದು ಕಷ್ಟ ಹಾಗೂ ಷೇರು ಮಾರುಕಟ್ಟೆಯ  ಬಗ್ಗೆ ಹೇಳಿದ ಕೂಡಲೇ ಗ್ರಾಹಕರು ಹೆದರುತ್ತಾರೆ.

    ಇನ್ಶೂರೆನ್ಸ್ ಹಾಗೂ ಮ್ಯೂಚುಯಲ್ ಫಂಡ್ ಗ್ರಾಹಕರ ಬೇರೆ ಬೇರೆ ಉದ್ಧೇಶಕ್ಕೆ ಅನುಗುಣವಾಗಿ ರಚಿಸಲಾಗಿದೆ. ಈ ಎರಡರಲ್ಲೂ ಗ್ರಾಹಕರು ಅಗತ್ಯಕ್ಕೆ ತಕ್ಕಂತೆ ಹೂಡಿಕೆ ಮಾಡಬೇಕಾಗುತ್ತದೆ.  ಆದರೆ  ದೀರ್ಘಾವಧಿಯ ಆರ್ಥಿಕ ಗುರಿ ಯೋಜನೆಗೆ ಮ್ಯೂಚುಯಲ್ ಫಂಡ್ ಒಂದು ಉತ್ತಮ ಹೂಡಿಕೆ ವಲಯ.

ಮ್ಯೂಚುಯಲ್ ಫಂಡ್ ನಲ್ಲಿ 3 ರೀತಿ ಹೂಡಿಕೆ ಮಾಡಬಹುದು

1.   ಭಾರೀ ಮೊತ್ತದ / ಏಕ ಮಾತ್ರ ಹೂಡಿಕೆ ಯೋಜನೆ (Lumsum/single Investment Plan):-

ಹೂಡಿಕೆದಾರರು ಭಾರಿ ಮೊತ್ತವನ್ನು ಒಂದೇಸಲ ಹೂಡಿಕೆ ಮಾಡುವು ಅಥವಾ ತನ್ನಲ್ಲಿ ಯಾವಾಗ ಹಣವಿದ್ದಾಗ ಅಥವಾ ಮಾರುಕಟ್ಟೆ ಕೆಳಮುಖವಾಗಿರುವಾಗ ಹೆಚ್ಚಿನ ಲಾಭಗಳಿಸಲು ಭಾರೀ ಮೊತ್ತದ ಹೂಡಿಕೆ ಮಾಡುವುದು.

2.   ಕ್ರಮಬದ್ದ / ವ್ಯವಸ್ಥಿತ ಹೂಡಿಕೆ ಯೋಜನೆ (SIP-Systematic Investment Plan):-

ಇದು ತುಂಬಾ ಪ್ರಸಿದ್ದವಾದ ಯೋಜನೆ ಅಧಿಕ ಜನರು ಈ ಯೋಜನೆ ಮೂಲಕ ಹೂಡಿಕೆ ಮಾಡುತ್ತಾರೆ ಇದರ ಬಗ್ಗೆ ಹೆಚ್ಚಿನ ವಿವರಣೆಯನ್ನು ಕೆಳಗೆ ನೀಡಿದ್ದೇನೆ

3.   ವ್ಯವಸ್ಥಿತ ವರ್ಗಾವಣೆ ಯೋಜನೆ(Systematic Transfer Plan):-

ಹೂಡಿಕೆದಾರರು ಯಾವುದೇ ಮ್ಯೂಚುಯಲ್ ಫಂಡ್ ನಲ್ಲಿ ಭಾರಿ ಮೊತ್ತವನ್ನು ಹೂಡಿಕೆಮಾಡಿದ್ದು ತಮ್ಮ ಹೂಡಿಕೆಯನ್ನು ಇತರ ಮ್ಯೂಚುಯಲ್ ಫಂಡ್ ಗಳಿಗೆ  ವರ್ಗಾವಣೆ ಮಾಡುವುದು. ಇದು ಏಕಮಾತ್ರ ವರ್ಗಾವಣೆ  ಅಥವಾ ವ್ಯವಸ್ಥಿತವರ್ಗಾವಣೆಯು ಆಗಿರಬಹುದು.

    

ಕ್ರಮಬದ್ದ ಹೂಡಿಕೆ ಯೋಜನೆ (SIP-Systematic Investment Plan).

ಕನ್ನಡದಲ್ಲಿ ಒಂದು ಗಾದೆ ಇದೆ ಹನಿ ಹನಿ ಕೂಡಿದರೆ ಹಳ್ಳ " ಈ ಗಾದೆಯು SIPಗೆ ಸರಿಯಾಗಿ ಹೋಲಿಕೆಯಾಗುತ್ತದೆ.ಕ್ರಮಬದ್ದ ಹೂಡಿಕೆ ಯೋಜನೆ (Systematic Investment Plan) ಎನ್ನುವುದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಒಂದು ವಿಧಾನವಾಗಿದ್ದು, ಈ ವಿಧಾನವು ಸರಳವಾಗಿ ಸಿಪ್(SIP) ಎಂದು ಕರೆಯಲ್ಪಡುತ್ತದೆ.  SIPನಲ್ಲಿ ಹೂಡಿಕೆದಾರರು ಮ್ಯೂಚುವಲ್ ಫಂಡ್ ಯೋಜನೆಯನ್ನು ಆಯ್ಕೆ ಮಾಡಿದ ನಂತರ, ನಿಗದಿತ ಮಧ್ಯಂತರಗಳಲ್ಲಿ, ಅಂದರೆ ಪ್ರತೀ ತಿಂಗಳು, ಅಥವಾ 3 ತಿಂಗಳಿಗೊಮ್ಮೆ ಅಥವಾ ಇನ್ನು ಯಾದುದೇ ಆಯ್ಕೆ ಮಾಡಿದ ಮಧ್ಯಂತರಗಳಲ್ಲಿ ತಮ್ಮ ಆಯ್ಕೆಯ ನಿಗದಿತ ಮೊತ್ತವನ್ನು ಹೂಡಿಕೆ ಮಾಡುತ್ತಾರೆ. SIP ಹೂಡಿಕೆ ಯೋಜನೆಯು ಒಂದು ಬಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದಕ್ಕಿಂತ ಹೆಚ್ಚಾಗಿ ಒಂದು ಸಣ್ಣ ಮೊತ್ತವನ್ನು ಕಾಲಾನಂತರದಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಲಾಭವನ್ನು ನೀಡುತ್ತದೆ.

    ಒಮ್ಮೆ ನೀವು ಒಂದು ಅಥವಾ ಹೆಚ್ಚಿನ SIP ಯೋಜನೆಗಳನ್ನು ಆಯ್ಕೆ ಮಾಡಿದ್ದರೆ, ನೀವು ನಿಗದಿ ಪಡಿಸಿದ ಹಣವದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಡೆಬಿಟ್(ECS) ಮಾಡಲಾಗುತ್ತದೆ ಮತ್ತು ಪೂರ್ವನಿರ್ಧರಿತ ಸಮಯದ ಮಧ್ಯಂತರದಲ್ಲಿ ನೀವು ಆಯ್ಕೆ ಮಾಡಿದ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ದಿನದ ಕೊನೆಯಲ್ಲಿ, ಮ್ಯೂಚುವಲ್ ಫಂಡ್‌ನ NAVಗೆ ಅವಲಂಬಿಸಿ ಮ್ಯೂಚುವಲ್ ಫಂಡ್‌ಗಳ ಘಟಕಗಳನ್ನು(units) ನಿಮಗೆ ಹಂಚಲಾಗುತ್ತದೆ.

  • SIP ನಿಮ್ಮ ಹೂಡಿಕೆಯ ಮೊತ್ತವನ್ನು ಯಾವುದೇ ಸಮಯದಲ್ಲಿ ಹೇಚ್ಚಿಸುವ ಮತ್ತು ಕಡಿಮೆಗುಳಿಸುವ ನಮ್ಯತೆಯನ್ನು(flexibility) ನೀಡುತ್ತದೆ.
  • SIP ರೂಪಾಯಿ ವೆಚ್ಚವನ್ನು ಸರಾಸರಿ ಮಾಡುತ್ತದೆ (Rupee cost Averaging).
  • ಷೇರು ಮಾರುಕಟ್ಟೆಯ  ಸರಿಯಾದ ಹೂಡಿಕೆ ಸಮಯವನ್ನು ನಿರ್ಧರಿಸ ಬೇಕಾಗಿಲ್ಲ, ಯಾವುದೇ ಸಮಯದಲ್ಲಿ SIP ಹೂಡಿಕೆ ಮಾಡಬಹುದು.
  • ದೀರ್ಘಾವಧಿಯ ಆರ್ಥಿಕ ಗುರಿ ಯೋಜನೆಗೆ  SIP ಸಹಾಯ ಮಾಡುತ್ತದೆ.
  • SIP ಮೂಲಕ ಹೂಡಿಕೆಗಳು ವೈವಿಧ್ಯೀಕರಣ (diversification),  ದ್ರವ್ಯತೆ(Liquidity) ಮತ್ತು ಉತ್ತಮ ಆದಾಯವನ್ನು ನೀಡುತ್ತವೆ.  SIP ನಮ್ಮಲ್ಲಿ ಉಳಿತಾಯಮಾಡುವ  ಶಿಸ್ತನ್ನು ತರುತ್ತದೆ, ಇದು ದುರಾಸೆಯ ಪ್ರಚೋದನೆಗಳಿಗೆ ಬಲಿಯಾಗುವ ಬದಲು ತಾರ್ಕಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ,

ನೀವು ಷೇರು ಮಾರುಕಟ್ಟೆಯ ಏರಿಳಿತಗಳ ನಷ್ಟ ಅಪಾಯಗಳನ್ನು ಕಡಿಮೆ ಮಾಡಲು ಬಯಸಿದರೆ ಖಂಡಿತವಾಗಿ SIPಯಲ್ಲಿ ಹೂಡಿಕೆ ಮಾಡಿ.

ಆತ್ಮೀಯರೇ ಮುಂದಿನ ಅಂಕಣದಲ್ಲಿ SIP ಮೂಲಕ ಕೋಟಿ ರೂಪಾಯೀಗಳನ್ನು ಸಂಪಾದಿಸುವುದು ಹೇಗೆ ಎಂಧು ತಿಳಿದುಕೊಳ್ಳೋಣ . ಮುಂದಿನ ಅಂಕಣವು ಇನ್ನೂ ಅಧಿಕ ಕುತೂಹಲಕಾರಿಯಾಗಿರಲಿದೆ.

ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.