ಸಾಮಾನ್ಯವಾಗಿ ನಾವು ತಿಂಗಳ ಸಂಬಳ ಬಂದ ಕೂಡಲೇ ಮೊದಲು ನಮ್ಮ ಮನೆಗೆ ಬೇಕಾದ ಮಾಸಿಕ ಸಮಾಲುಗನ್ನು ಖರೀದಿಸುತ್ತೆವೆ. ಆಮೇಲೆ ಮನೆ ಬಾಡಿಗೆ, ಮಕ್ಕಳ ಫೀಸ್, ಕರೆಂಟ್ ಬಿಲ್, ಕೇಬಲ್ ಬಿಲ್, ಮಿಲ್ಕ್ ಬಿಲ್, ವಾಟರ್ ಬಿಲ್, ಮೊಬೈಲ್ ಬಿಲ್ ಹೀಗೆ ಹಲವಾರು ಬಿಲ್ಲುಗಳನ್ನು ಕಟ್ಟುತ್ತೇವೆ. ಉಳಿತಾಯ ಎನ್ನುವುದು ಕೊನೆಯ ಅಂಶವಾಗಿದೆ. ನನ್ನ ಪ್ರಕಾರ ಉಳಿತಾಯವನ್ನು ಅನಿವಾರ್ಯ ಖರ್ಚು ಎಂದು ಪರಿಗಣಿಸ ಬೇಕು. ಉದಾಹರಣೆಗೆ ಈ ತಿಂಗಳು ಮನೆಗೆ ನೀವು ಅಕ್ಕಿ, ಸಕ್ಕರೆ, ಬೇಳೆ ಏನೇ ಕಷ್ಟ ಬಂದರು ತರಲೇ ಬೇಕಾಗುತ್ತದೆ. ಉಳಿತಾಯವನ್ನು ಕೂಡ ಹಾಗೆನೇ ಪರಿಗಣಿಸಬೇಕು. ಆಗ ನೀವು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಮನೆಯ ತಿಂಗಳ ಬಜೆಟ್ ನಲ್ಲಿ ಮೊದಲ  ಆದ್ಯತೆ  ಉಳಿತ್ತಾಯವಾಗಿರಬೇಕು. ಅದು ರೂ.100 ಆಗಿರಬಹುದು ಅಥವಾ 10,00,000 ಲಕ್ಷ ಆಗಿರಬಹುದು, ನಿಮ್ಮ ಅನುಕೂಲಕ್ಕೆ ತಕ್ಕಂತೆ, ನಿಮಗೆ ಹೆಚ್ಚಿನ ಹೊರೆಯಾಗದಂತೆ, ಯಾವುದೇ ಸಮಯದ್ಲಲೂ ನಿಭಾಯಿಸುವಂತೆ ಇರಬೇಕು ನಿಮ್ಮ  ಮಾಸಿಕ ಉಳಿತಾಯ.
ನೀವು ಎಷ್ಟು ಹಣವನ್ನು ಉಳಿತಾಯ ಮಾಡುತ್ತೀರಿ ಎಂಬುವುದಕ್ಕಿಂತ ನೀವು ಎಷ್ಟು ನಿಯತ್ತಾಗಿ, ವ್ಯವಸ್ಥಿತವಾಗಿ, ಶಿಸ್ತು ಬದ್ದವಾಗಿ ಉಳಿತಾಯ ಮಾಡುತ್ತೀರಿ ಎಂಬುವುದು ಮುಖ್ಯ.”



  ಕೆಳಗಿನ ಪರಿವಿಡಿಯನ್ನು (table) ಗಮನಿಸಿ.  ಉದಾಹರಣೆಗೆ ಮಾಸಿಕ 10,500/- ರೂ. ಮ್ಯೂಚುಯಲ್ ಫಂಡ್ SIP ಮೂಲಕ ಹೂಡಿಕೆ ಮಾಡಿದರೆ, ಶೇಕಡಾವಾರು ನಮ್ಮ ಹೂಡಿಕೆ ಎಷ್ಟು ಆದಾಯವನ್ನು ನೀಡುತ್ತದೆ  ಅದರ ಪ್ರಕಾರ ನಾವು ಯಾವಾಗ ಕೋಟ್ಯಧಿಪತಿಯಾಗಬಹುದು ಎನ್ನುವುದು ತಿಳಿಯುತ್ತದೆ,
ಮಾಸಿಕ SIP ಮೊತ್ತ:-10,500/-
ನಿರೀಕ್ಷಿತ
 
ಆದಾಯ %
ಹೂಡಿಕೆ ಮಾಡಬೇಕಾದ ವರ್ಷಗಳು
5
10
15
20
25
30
10%
₹ 810,303
₹ 2,115,305
₹ 4,217,023
₹ 7,601,861
₹ 13,053,176
₹ 21,832,574
12%
₹ 851,588
₹ 2,352,377
₹ 4,997,280
₹ 9,658,502
₹ 17,873,169
₹ 32,350,219
15%
₹ 917,092
₹ 2,761,691
₹ 6,471,839
₹ 13,934,271
₹ 28,943,888
₹ 59,133,589
20%
₹ 1,036,392
₹ 3,615,266
₹ 10,032,329
₹ 26,000,037
₹ 65,732,803
₹ 164,600,641
ಈ ಪರಿವಿಡಿಯ ಪ್ರಕಾರ ನಾವು ಕೋಟ್ಯಧಿಪತಿಯಾಗಲು 10,500/- ರೂ ಪ್ರತೀ ತಿಂಗಳು ಹೂಡಿಕೆ ಮಾಡಿದರೆ
ಪ್ರತಿಶತ 20% ನಿರೀಕ್ಷಿತ ಆದಾಯ  ಪ್ರಕಾರ 15 ವರ್ಷಗಳಲ್ಲಿ
ಪ್ರತಿಶತ 15% ನಿರೀಕ್ಷಿತ ಆದಾಯ  ಪ್ರಕಾರ 18 ವರ್ಷಗಳಲ್ಲಿ
ಪ್ರತಿಶತ 12% ನಿರೀಕ್ಷಿತ ಆದಾಯ  ಪ್ರಕಾರ 21 ವರ್ಷಗಳಲ್ಲಿ
ಮಾಸಿಕ SIP ಮೊತ್ತ:-5,000/-
ನಿರೀಕ್ಷಿತ
 
ಆದಾಯ %
ಹೂಡಿಕೆ ಮಾಡಬೇಕಾದ ವರ್ಷಗಳು
5
10
15
20
25
30
10%
₹ 385,859
₹ 1,007,288
₹ 2,008,106
₹ 3,619,934
₹ 6,215,798
₹ 10,396,464
12%
₹ 405,518
₹ 1,120,179
₹ 2,379,657
₹ 4,599,287
₹ 8,511,033
₹ 15,404,866
15%
₹ 436,710
₹ 1,315,091
₹ 3,081,828
₹ 6,635,367
₹ 13,782,804
₹ 28,158,852
20%
₹ 493,520
₹ 1,721,555
₹ 4,777,300
₹ 12,380,970
₹ 31,301,335
₹ 78,381,258
ಈ ಮೆಲ್ಕಂಡ ಪರಿವಿಡಿಯ ಪ್ರಕಾರ ನಾವು ಕೋಟ್ಯಧಿಪತಿಯಾಗಲು 5000/- ರೂ ಪ್ರತೀ ತಿಂಗಳು ಹೂಡಿಕೆ ಮಾಡಿದರೆ
ಪ್ರತಿಶತ 20% ನಿರೀಕ್ಷಿತ ಆದಾಯ  ಪ್ರಕಾರ 19 ವರ್ಷಗಳಲ್ಲಿ.
ಪ್ರತಿಶತ 15% ನಿರೀಕ್ಷಿತ ಆದಾಯ  ಪ್ರಕಾರ 23 ವರ್ಷಗಳಲ್ಲಿ.
ಪ್ರತಿಶತ 12% ನಿರೀಕ್ಷಿತ ಆದಾಯ  ಪ್ರಕಾರ 27 ವರ್ಷಗಳಲ್ಲಿ.
ಇದೇ ರೀತಿ ನೀವು 10 ವರ್ಷಗಳಲ್ಲಿ ಕೋಟ್ಯಧಿಪತಿ ಯಾಗಬೇಕೆಂದರೆ ನೀವು ಪ್ರತೀ ತಿಂಗಳು 20% ನಿರೀಕ್ಷಿತ ಆದಾಯದ  ಪ್ರಕಾರ Rs.30,000/- SIP ಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.  ಈ ಪರಿವಿಡಿಯನ್ನು ಗಮನಿಸಿ
ನಿರೀಕ್ಷಿತ
 
ಆದಾಯ %
ಹೂಡಿಕೆ ಮಾಡಬೇಕಾದ ವರ್ಷಗಳು
5
10
15
20
25
30
10%
₹ 2,315,152
₹ 6,043,728
₹ 12,048,637
₹ 21,719,602
₹ 37,294,788
₹ 62,378,781
12%
₹ 2,433,108
₹ 6,721,077
₹ 14,277,942
₹ 27,595,721
₹ 51,066,197
₹ 92,429,196
15%
₹ 2,620,262
₹ 7,890,546
₹ 18,490,968
₹ 39,812,203
₹ 82,696,823
₹ 168,953,112
20%
₹ 2,961,119
₹ 10,329,330
₹ 28,663,798
₹ 74,285,820
₹ 187,808,010
₹ 470,287,545
     ಯಾವುದೇ ಕೆಲಸ ಮಾಡಲು ಒಬ್ಬ ವ್ಯಕ್ತಿಗೆ ಮೊದಲು ಆಸಕ್ತಿ , ಉತ್ಸಾಹ ಇರಬೇಕು. ಅವನು ದೊಡ್ಡ ಕನಸುಗಾರ ಹಾಗೂ ತನ್ನ ಗುರಿಯನ್ನು ಸಾಧಿಸುವ ಛಲ ಒಂದಿದ್ದರೆ.ಯಶಸ್ಸು ಅವನಿಗೆ ತಾನಾಗಿಯೇ ಒಲಿಯುತ್ತದೆ. ಯಾರು ತನ್ನ ಮೊದಲ ತಿಂಗಳ ಸಂಬಳದಲ್ಲಿ SIP ಮಾಡುತ್ತಾರೋ ಅವರು ತನ್ನ ಆರ್ಥಿಕ ಯೋಜನೆಯ ಗುರಿಯನ್ನು ಮುಟ್ಟುವುದರಲ್ಲಿ ಯಾವುದೇ ಸಂದೇಹವಿಲ್ಲ

ಆರೇ ಕೋಟಿ ಮಾಡುವುದು ತುಂಬಾ ಸುಲಭ ಮತ್ತು ಸರಳವಾಗಿದೆ ಅನಿಸುತ್ತದೆ ಅಲ್ಲವೇ!!!. ಆದರೆ ನೀವು ಇನ್ನು ಕೆಲವು ವಿಷಯಗಳನ್ನು ತಿಳಿದುಕೊಳ್ಳ ಬೇಕಾಗಿದೆ.
Ø  ಮ್ಯೂಚುಯಲ್ ಫಂಡ್‌ಗಳ ಪರಿಭಾಷೆ(Terminologies).
Ø  ಮ್ಯೂಚುವಲ್ ಫಂಡ್‌ನಲ್ಲಿ ಯಾರ್ಯಾರು ಹೂಡಿಕೆ ಮಾಡಬಹುದು.
Ø  ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅಗತ್ಯವಾದ ದಾಖಲೆಗಳು
Ø  ಉನ್ನತ ಪ್ರದರ್ಶನ SIP (Top performing SIP)
Ø  ಉನ್ನತ ಸಾಧನೆ ಮಾಡುವ ಕ್ಷೇತ್ರಗಳು(top performing sectors)
Ø  ಎಲ್ಲಿ ಹೂಡಿಕೆ ಮಾಡುಬೇಕು, ಯಾವ ರೀತಿಯ ಮ್ಯೂಚುಯಲ್ ಫಂಡ್ ಗಳನ್ನು ಆಯ್ಕೆ ಮಾಡುವುದು
ಮುಂದಿನ ಅಂಕಣವು ಇನ್ನೂ ಅಧಿಕ ಕುತೂಹಲಕಾರಿಯಾಗಿರಲಿದೆ.
ಪ್ರಿಯ ಹೂಡಿಕೆದಾರರೇ, ನಿಮ್ಮ ಆರ್ಥಿಕ ಗುರಿಯ ಮೊತ್ತವನ್ನು ಮತ್ತು ಗುರಿಸಾಧಿಸಬೇಕಾದ ವರ್ಷವನ್ನು ತಿಳಿಸಿ, ನೀವು ಹೂಡಿಕೆ ಮಾಡಬೇಕಾದ ಮಾಸಿಕ ಮೊತ್ತವನ್ನು ತಿಳಿಸಿಕೊಡುತ್ತೇನೆ.